ಗಾದೆ ಮಾತು ವಿಸ್ತರಣೆ ಅತಿ ಆಸೆ ಗತಿ ಕೆಡಿಸಿತು

☘ ☘ ☘ಗಾದೆ ಮಾತು ವಿಸ್ತರಣೆ

★ಅತಿ ಆಸೆ ಗತಿ ಕೆಡಿಸಿತು ೲೲ

ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.
ಮನುಷ್ಯನಿಗೆ ಆಸೆ ಇರಬೇಕು. ಅಸೆ ಮನುಷ್ಯನ ಸಹಜ ಪ್ರವೃತ್ತಿ. ಆಸೆ ಇಲ್ಲದವ ಬದುಕಲಾರ. ಆಸೆಯೇ ಉತ್ಸಾಹದ ಜನನಿ. ಅದು ಜೀವನದ ಸಂಚಾಲನ ಶಕ್ತಿ. ಆಸೆಯ ಆಸರೆ ಇಲ್ಲದಿದ್ದರೆ ಮನುಷ್ಯ ಕಾಡುಪ್ರಾಣಿಯಂತೆ ಜೀವಿಸುತ್ತಿದ್ದ. ಆದರೆ ಆಸೆಯೂ ಹಿತಮಿತವಾಗಿರಬೇಕು. ಅತಿಯಾದ ಆಸೆ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ್ದಾನೇ. ಅತಿಯಾದರೆ ಅಮ್ರುಥವು ಕೂಡ ವಿಷವಾಗುತ್ತದೆ. ಅತಿಯಾಸೆಯಿಂದ ಮನುಷ್ಯ ನೆಮ್ಮದಿಯನ್ನು ಕಳೆದುಕೊಳ್ಳ ಬೇಕಾಗುತ್ತದೆ. ಪ್ರತಿದಿನ ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನು ಪಡೆದ ರೈತನೊಬ್ಬನು ಒಂದೇ ಬಾರಿಗೆ ಶ್ರೀಮಂತನಾಗಬೇಕೆಂಬ ಅತಿ ಆಸೆಯಿಂದ ಕೋಳಿಯ ಹೊತ್ತವನ್ನು ಸೀಳಿ ಒಂದೂ ಸಿಗದೇ ನಿರಾಶೆಯಾದನು.

ಮುಟ್ಟಿದ್ದೆಲ್ಲ ಚಿನ್ನವಾಗಬೇಕೆಂದು ವರವನ್ನು ಪಡೆದ ಮೈದಾಸ ತನ್ನ ಮಗಳನ್ನು ಚಿನ್ನದ ಗೊಂಬೆಯನ್ನಾಗಿಸಿ ದುಃಖಪಡುತ್ತಾನೆ ಆಸೆಯೇನೆಂಬುದು ಬಹಳ ಕೆಟ್ಟದ್ದು.  ಮನುಷ್ಯನು ಮುಪ್ಪಾನಪ್ಪಿದರು ಆಸೆಯೂ ಬಿಡದು. ಹೀಗೆ ಅತಿ ಆಸೆ ಯಾರಿಗೂ ಇಂದಿಗೂ ಒಳ್ಳೆಯದಲ್ಲ. ಆದ್ದರಿಂದ ಅತಿ ಆಸೆ  ಇಲ್ಲವಾದರೆ ಅತಿ ಆಸೆ ಗತಿಕೆಡಿಸುತ್ತದೆ.

Post a Comment

17 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)