ಸಂಧಿ ಪ್ರಕರಣ
ಸಂಧಿ ಅರ್ಥ : ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು.
ಉದಾ:
ಗಾಣ + ಇಗ =ಗಾಣಿಗ
ಆಡು + ಇಸು =ಆಡಿಸು
ಹಸು + ಇನ =ಹಸುವಿನ
‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.
ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು
ಸ್ವರ ಸಂಧಿ :
ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ ಎನಿಸುವುದು.
ಉದಾ:
ಊರು(ಉ)+(ವ) ಅನ್ನು = ಊರನ್ನು
ಮನೆ(ಎ)+(ಅ) ಅಲ್ಲಿ =ಮನೆಯಲ್ಲಿ
ವ್ಯಂಜನ ಸಂಧಿ
ಸ್ವರದ ಮುಂದೆ ವ್ಯಂಜನ ಬಂದು ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು ವ್ಯಂಜನ ಸಂಧಿ ಎನಿಸುವುದು.
ಉದಾ:
ಮಳೆ(ಕ) +(ಗ)ಕಾಲ =ಮಳೆಗಾಲ
ಬೆಟ್ಟದ(ತ)+(ದ)ತಾವರೆ =ಬೆಟ್ಟದಾವರೆ
ಸಂಧಿಗಳ ವಿಧಗಳು
ಕನ್ನಡ ಸಂಧಿಗಳು
ಕನ್ನಡ ಸಂಧಿಗಳು
1.ಲೋಪ ಸಂಧಿ
ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು
ಉದಾ:
ಹಣದಾಸೆ – ಹಣದ + ಆಸೆ “ಅ” ಕಾರಲೋಪ
ನಿನಗಲ್ಲದೆ – ನಿನಗೆ +ಅಲ್ಲದೆ “ಎ”ಕಾರಲೋಪ
ಅಲ್ಲೊಂದು – ಅಲ್ಲಿ +ಒಂದು “ಇ” ಕಾರಲೋಪ
ಊರಲ್ಲಿ – ಊರು +ಅಲ್ಲಿ “ಉ” ಕಾರಲೋಪ
2.ಆಗಮ ಸಂಧಿ
ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೇಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”. ಆಗಮ ಸಂಧಿಯ ವಿಧಗಳು
ಯ -ಕಾರ ಆಗಮ ಸಂಧಿ
ವ-ಕಾರ ಆಗಮ ಸಂಧಿ
1.ಯ ಕಾರ ಆಗಮ ಸಂಧಿ ಆ ಇ ಈ ಎ ಏ ಐ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವು ಆಗಮವಾಗುವುದು”.
ಉದಾ:
ಕೆರೆಯನ್ನು = ಕೆರೆ + ಅನ್ನು
ಕಾಯದೆ = ಕಾ + ಅದೆ
ಬೇಯಿಸಿದ = ಬೇ + ಇಸಿದ
ಕುರಿಯನ್ನು , ಮೀಯಲು , ಚಳಿಯಲ್ಲಿ
2.ವ ಕಾರ ಆಗಮ ಸಂಧಿ ಅ ಉ ಊ ಋ ಓ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ನಡುವೆ “ವ” ಕಾರವೂ ಆಗಮವಾಗುವುದು”. ಉದಾ:
ಮಗುವಿಗೆ =ಮಗು + ಇಗೆ
ಗುರುವನ್ನು = ಗುರು + ಅನ್ನು
ಹೂವಿದು= ಹೂ + ಇದು
ಗೋವಿಗೆ , ಶಾಂತವಾಗಿ , ರಸವಾಗಿ ,
3.ಆದೇಶ ಸಂಧಿ
ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”.
ಕ – ಗ
ಚ – ಜ
ಟ – ಡ
ತ – ದ
ಪ – ಬ
ಉದಾ:
ಮಳೆಗಾಲ =ಮಳೆ +ಕಾಲ
ಕಂಬನಿ = ಕಣ್ + ಪನಿ
ಕೈದಪ್ಪು = ಕೈ + ತಪ್ಪು
ಹೊಸಗನ್ನಡ , ಬೆಟ್ಟದಾವರೆ ,ಕೊನೆಗಾಲ,
ಪ್ರಕೃತಿ ಭಾವ ಸಂಧಿ
ಕೆಲವೆಡೆ ಸ್ವರಕ್ಕೆ ಸ್ವರ ಪರವಾದರೆ ಯಾವ ಸಂಧಿಕಾರ್ಯವು ನಡೆಯುವುದಿಲ್ಲ ಇದನ್ನು ಪ್ರಕೃತಿ ಭಾವ ಎಂದು ಕರೆಯುತ್ತಾರೆ . ಉದಾ: ಅಣ್ಣ ಓಡಿಬಾ = ಅಣ್ಣ + ಓಡಿಬಾ ಅಬ್ಬಾ ಅದುಹಾವೆ? = ಅಬ್ಬಾ + ಅದುಹಾವೆ? ರಾಮ ಎಲ್ಲಿದ್ದೀಯೆ? = ರಾಮ + ಎಲ್ಲಿದ್ದೀಯೆ?
ಸಂಸ್ಕೃತ ಸಂಧಿ
ಸಂಸ್ಕೃತ ಸಂಧಿಗಳ ವಿಧಗಳು
ಸಂಸ್ಕೃತ ಸ್ವರ ಸಂಧಿಗಳು
ಸಂಸ್ಕೃತ ವ್ಯಂಜನ ಸಂಧಿಗಳು
ಸಂಸ್ಕೃತ ಸ್ವರ ಸಂಧಿಗಳ ವಿಧಗಳು
ಸವರ್ಣ ದೀರ್ಘ ಸಂಧಿ
ಗುಣ ಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
1.ಸವರ್ಣ ದೀರ್ಘ ಸಂಧಿ ಸವರ್ಣ ಸ್ವರಗಳು ಬಂದರೆ ಮುಂದೊಂದು ಬಂದಾಗ, ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘ ಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುವರು . ಅ-ಅ=ಆ , ಅ-ಆ=ಆ, ಇ-ಇ=ಈ , ಇ-ಈ=ಈ ಉ-ಉ=ಊ , ಉ-ಊ=ಊ
ಉದಾ:
ದೇವಾಲಯ= ದೇವ + ಆಲಯ
ವಿದ್ಯಾಭ್ಯಾಸ= ವಿದ್ಯಾ + ಅಭ್ಯಾಸ
ಗಿರೀಶ= ಗಿರಿ + ಈಶ
ಗುರೂಪದೇಶ= ಗುರು + ಉಪದೇಶ
ಶುಭಾಶಯ , ರವೀಂದ್ರ , ದೇವಾಸುರ , ಫಲಾಹಾರ , ಸೂರ್ಯಸ್ತ.
2.ಗುಣ ಸಂಧಿ ಅ .ಆ ಕಾರಗಳ ಮುಂದೆದ ಇ.ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಏ” ಕಾರವೂ. ಉ.ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಓ” ಕಾರವೂ , ಋ ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ “ಅರ್” ಕಾರವೂ ಆದೇಶವಾಗಿ ಬಂದರೆ ಅಂತಹ ಸಂಧಿಯನ್ನು “ಗುಣಸಂಧಿ” ಎಂದು ಕರೆಯಲಾಗುತ್ತದೆ”
ಅ-ಆ,ಕಾರಗಳಿಗೆ ಇ-ಈ ಕಾರ ಪರವಾದಾಗ=ಏ
ಅ-ಆ,ಕಾರಗಳಿಗೆ ಉ-ಊ ಕಾರ ಪರವಾದಾಗ=ಓ
ಅ-ಆ,ಕಾರಗಳಿಗೆಋ ಕಾರ ಪರವಾದಾಗ=ಅರ್
ಉದಾ:
ದೇವೇಂದ್ರ=ದೇವ + ಇಂದ್ರ
ಸಪ್ತರ್ಷಿ=ಸಪ್ತ + ಋಷಿ
ಸುರೇಂದ್ರ=ಸುರ + ಇಂದ್ರ
ಜನೋಪಕಾರ=ಜನ + ಉಪಕಾರ
ನಾಗೇಶ , ಏಕೋನ , ಚಂದ್ರೋದಯ ,ಉಮೇಶ
3.ವೃದ್ಧಿ ಸಂಧಿ ಅ.ಆ ಕಾರಗಳಿಗೆ ಏ .ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಐ” ಕಾರವೂ. ಓ .ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಔ” ಕಾರವೂ ಆದೇಶವಾಗಿ ಬರುತ್ತದೆ ಇದಕ್ಕೆ ವೃದ್ದಿ ಸಂಧಿ ಎನ್ನುವರು”. ಅ,ಆ-ಏ, ಐ=ಐಅ, ಆ-ಒ, ಓ=ಔ
ಉದಾ:
ಏಕೈಕ= ಏಕ + ಏಕ
ವನೌಷಧಿ=ವನ + ಔಷಧಿ
ಜನೈಕ್ಯ=ಜನ + ಐಕ್ಯ
ವನೌಷಧ , ಸಿದ್ಧೌಷದ , ಲೋಕೈಕವೀರ
4.ಯಣ್ ಸಂಧಿ ಇ ,ಈ ಕಾರಗಳ ಮುಂದೆ ಅ ,ಆ ಕಾರಗಳು ಪರವಾದರೆ ಅವೆರಡರಸ್ಥಾನದಲ್ಲಿ “ಯ್” ಕಾರವೂ. ಉ ,ಊ ಕಾರಗಳಿಗೆ “ವ್” ಕಾರವೂ ಋ ಕಾರಕ್ಕೆ ‘ರ್’ ಕಾರವೂ ಆದೇಶಗಳಾಗಿ ಬರುವುದಕ್ಕೆ ಯಣ್ ಸಂಧಿ ಎನ್ನುವರು” ಇ,ಈ-ಅ,ಆ=’ಯ್’ ಉ,ಊ-ಅ,ಆ=’ವ್’ ಋ-ಅ,ಆ=’ರ್’ ಉದಾ:
ಪ್ರತ್ಯುತ್ತರ= ಪ್ರತಿ +ಉತ್ತರ
ಮನ್ವಂತರ= ಮನು +ಅಂತರ
ಜಾತ್ಯಾತೀತ=ಜಾತಿ +ಅತೀತ
ಮಾತ್ರಂಶ=ಮಾತೃ +ಅಂಶ
ಅತ್ಯವಸರ , ಮನ್ವಾದಿ , ಅತ್ಯಾಶೆ , ಗತ್ಯಂತರ
ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು
ಜಶ್ತ್ವ ಸಂಧಿ
ಶ್ಚುತ್ವ ಸಂಧಿ
ಅನುನಾಸಿಕ ಸಂಧಿ
1.ಜಶ್ತ್ವ ಸಂಧಿ ಪೂರ್ವ ಪದದ ಕೊನೆಯಲ್ಲಿರುವ ಕ,ಚ,ಟ,ತ,ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ವ್ಯಂಜನಾಕ್ಷರಗಳಾದ ಗ,ಜ,ಡ,ದ,ಬ ಗಳು ಆದೇಶವಾಗಿ ಬರುವುದಕ್ಕೆ ಜಶ್ತ್ವ ಸಂಧಿ ಎಂದು ಹೆಸರು”. ಉದಾ:
ವಾಗೀಶ=ವಾಕ್ + ಈಶ
ಅಜಂತ=ಅಚ್ + ಅಂತ
ಷೆಡಂಗ=ಷಟ್ +ಅಂಗ
ಸದ್ಭಾವ=ಸತ್ +ಭಾವ
ಅಜ್ಜ=ಅಪ್ + ಜ
ದಿಗಂತ , ಅಜೌದಿ , ಷಡಾನನ , ಚಿದಾನಂದ , ಅಬ್ಧಿ
2.ಶ್ಚುತ್ವ ಸಂಧಿ ಶ್ಚು- ಎಂದರೆ ಶಕಾರ ಚ ವರ್ಗಾಕ್ಷರಗಳು(ಶ್ ಶಕಾರ ಚು=ಚ ವ ಜ ಝ ಞ) ಈ ಆರು ಅಕ್ಷರಗಳೇ “ಶ್ಚು” ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ. ಇವುಗಳು ಆದೇಶವಾಗಿ ಬರುವುದಕ್ಕೆ ಶ
10 Comments
I like it and i undarstand it👌👌👌😊😊😊😊
ReplyDeleteNo
Deleteಮಾಹಿತಿ ಚೆನ್ನಾಗಿದೆ ಆದರೆ ಕೆಲವು ದೋಷಗಳಿವೆ , ಸರಿಪಡಿಸಿ.
ReplyDeleteನಮಸ್ಕಾರ.
ಭಗವತ್ +ಚಿಂತನೆ
ReplyDeleteಇದು ಯಾವ ಸಂಧಿ
ಯಜ್ಞಾಶವ ಇದು ಯಾವ ಸಂಧಿ
This is not nice
ReplyDeletekannada janapada songs
ReplyDeleteಇದು ತುಂಬ ಪ್ರಯೋಜನವಾಗಿದೆ for 6th ತto 10th
ReplyDeleteIt is nice
ReplyDeleteThis comment has been removed by the author.
ReplyDelete"ನೀಲಾಕಾಶ" ಪದವು ಯಾವ ಸಂಧಿಗೆ ಸೇರುತ್ತದೆ?
ReplyDelete