ವಿಭಕ್ತಿ ಪ್ರತ್ಯಯ, ವಿಧಗಳು, ಹಳಗನ್ನಡ ಮತ್ತು ಹೊಸಗನ್ನಡದ ವಿಭಕ್ತಿ ಪ್ರತ್ಯಯಗಳು

ವಿಭಕ್ತಿ ಪ್ರತ್ಯಯಗಳು
ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು. ಅಥವಾ“ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ.”

ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ.ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು…

ವಿಭಕ್ತಿ ಪ್ರತ್ಯಯಗಳ ವಿಧಗಳು
ಕ್ರ ಸಂ ವಿಭಕ್ತಿಯ ಹೆಸರು ಹೊಸಗನ್ನಡ ಪ್ರತ್ಯಯ ಹಳಗನ್ನಡ ಪ್ರತ್ಯಯ ಕಾರಕಗಳು
1 ಪ್ರಥಮ ವಿಭಕ್ತಿ ಉ ಮ್ ಕರ್ತೃ
2 ದ್ವಿತೀಯ ವಿಭಕ್ತಿ ಅನ್ನು ಅಮ್ ಕರ್ಮ
3 ತೃತೀಯಾ ವಿಭಕ್ತಿ ಇಂದ ಇಮ್ ಕರಣ
4 ಚತುರ್ಥಿ ವಿಭಕ್ತಿ ಗೆ ಕೆ ಸಂಪ್ರಧಾನ
5 ಪಂಚಮಿ ವಿಭಕ್ತಿ ದೆಸೆಯಿಂದ ಅತ್ತಣಿಂ ಅಪಧಾನ
6 ಷಷ್ಠಿ ವಿಭಕ್ತಿ ಆ ಆ ಸಂಬಂಧ
7 ಸಪ್ತಮಿ ವಿಭಕ್ತಿ ಅಲ್ಲಿ ಒಳ್ ಅಧಿಕರಣ
ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ ಎಂಟು ವಿಧಗಳಿವೆ..

ಪ್ರಥಮವಿಭಕ್ತಿ ಉ
ದ್ವಿತೀಯವಿಭಕ್ತಿ ಅನ್ನು
ತೃತೀಯವಿಭಕ್ತಿ ಇಂದ
ಚತುರ್ಥಿವಿಭಕ್ತಿ ಗೆ, ಇಗೆ
ಪಂಚಮಿವಿಭಕ್ತಿ ದೆಸೆಯಿಂದ
ಷಷ್ಠಿವಿಭಕ್ತಿ ಅ
ಸಪ್ತಮಿವಿಭಕ್ತಿ ಅಲ್ಲಿ
ಸಂಭೋಧನವಿಭಕ್ತಿ ಮ ಏ
ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟು

ಪ್ರಥಮ ಕತೃರ್ಥ ಉ
ದ್ವಿತೀಯ ಕರ್ಮಾರ್ಥ ಅನ್ನು
ತೃತೀಯ ಕರಣಾರ್ಥ ಇಂದ
ಚತುರ್ಥೀ ಸಂಪ್ರಧಾನ ಗೆ
ಪಂಚಮಿ ಅಪಧಾನ ದೆಸೆಯಿಂದ
ಷಷ್ಠಿ ಸಂಭಂಧ ಅ
ಅಪ್ತಮಿ ಅಧಿಕರಣ ಅಲ್ಲಿ
ಸಂಬೋಧನ ಅಭಿಮುಖೀ ಏಆಕರಣ ಹಳಗನ್ನಡ ವಿಭಕ್ತಿ ಪ್ರತ್ಯಯಗಳು

ವಿಭಕ್ತಿ ಪ್ರತ್ಯಯ ರೂಪಗಳು
ಪ್ರಥಮಾ ಮ್ ಮ್ ರಾಮಂ
ದ್ವಿತೀಯಾ ಅಮ್ ರಾಮನಂ
ತೃತೀಯ ಇಮ್ ರಾಮನಿಂ
ಚತುರ್ಥೀ ಗೆ ರಾಮಂಗೆ
ಪಂಚಮಿ ಅತ್ತಣಿಂ ರಾಮನತ್ತಣಿಂ
ಷಷ್ಠಿ ಅ ರಾಮನ
ಸಪ್ತಮಿ ಒಳ್ ರಾಮನೊಳ್

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey 

Post a Comment

10 Comments

  1. ವಿಭಕ್ತಿ ಪ್ರತ್ಯಯಗಳು definition

    ReplyDelete
  2. ಸಿಂಹಂ ಯಾವ ವಿಭಕ್ತಿ

    ReplyDelete
  3. ಲೋಕದೊಳ್ ಲೋಕದೊಳು ಎಂಬುದು ಯಾವ ವಿಭಕ್ತಿ ಗೆ ಸೇರುತ್ತದೆ

    ReplyDelete
  4. ಮರಭೂಮಿಯನ್ನು ಇದರ ವಿಭಕ್ತಿ ಪ್ರತ್ಯಯಗಳು

    ReplyDelete
  5. ಸರಿಯಾದ ಉತ್ತರ

    ReplyDelete
  6. ಸಪ್ತಮಿ ವಿಭಕ್ತಿಯ ಕಾರಕರ್ಥ

    ReplyDelete
Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)