ಶರ ಷಟ್ಪದಿ

🖌🖌 ಶರ ಷಟ್ಪದಿ

ಶರ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಶರವೇ ಷಟ್ಪದಿಯಲ್ಲಿ ಅತ್ಯಂತ ಚಿಕ್ಕದು. ನಾಗವರ್ಮ ಹೇಳಿರುವ ಇದರ ಲಕ್ಷಣಗಳು. ಶರ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೪ ಮಾತ್ರೆಯ ಎರಡು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೪ ಮಾತ್ರೆಯ ೩ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಇದರಲ್ಲಿ ಮಧ್ಯೆ ಗುರುವಿನ ಅಂದರೆ (U - U)ಜಗಣ, ಶರ ಷಟ್ಪದಿಯ ಯಾವ ಗಣದಲ್ಲಿಯೂ ಬರಕೂಡದು.

ಉದಾಹರಣೆ:

ಈಶನ ಕರುಣೆಯ
ನಾಶಿಸು ವಿನಯದಿ
ದಾಸನ ಹಾಗೆಯೆ ನೀ ಮನವೇ
ಕ್ಲೇಶದ ವಿಧ ವಿಧ
ಪಾಶದ ಹರಿದು ವಿ
ಲಾಸದಿ ಸತ್ಯವ ತಿಳಿ ಮನವೇ
ಇದರ ಛಂದಸ್ಸಿನ ಪ್ರಸ್ತಾರ:

ಈಶನ |ಕರುಣೆಯ
ನಾಶಿಸು | ವಿನಯದಿ
ದಾಸನ | ಹಾಗೆಯೆ | ನೀ ಮನ | ವೇ
ಕ್ಲೇಶದ | ವಿಧ ವಿಧ
ಪಾಶದ | ಹರಿದು ವಿ
ಲಾಸದಿ | ಸತ್ಯವ | ತಿಳಿ  ಮನ | ವೇ
'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:

೪|೪
೪|೪
೪|೪|೪|-
೪|೪
೪|೪
೪|೪|೪|-

Post a Comment

0 Comments