ಕರ್ಮಣಿ ಪ್ರಯೋಗ
‘ಕರ್ಮಪದವನ್ನು ಅನುಸರಿಸಿ ಕ್ರಿಯಾಪದ ಪ್ರಯೋಗವಾಗಿರುವುದಕ್ಕೆ ಕರ್ಮಣಿ ಪ್ರಯೋಗ ಎಂದು ಹೆಸರು”
ಉದಾ: ಕರ್ಮಪದ ಕರ್ತೃಪದ ಕ್ರಿಯಾಪದ ರಾವಣನು ರಾಮನಿಂದ ಕೊಲ್ಲಲ್ಪಟ್ಟನು
ಈ ಉದಾಹರಣೆಯಲ್ಲಿ“ರಾವಣನು” ಎಂಬ ಕರ್ಮಪದವು ಪ್ರಧಾನವಾಗಿದೆ. ಹಾಗೂ ಪ್ರಥಮ ವಿಭಕ್ತಿಯಿಂದ ಕೂಡಿದೆ.ರಾಮನಿಂದ ಎಂಬ ಕರ್ತೃ ಪದವು ಕರ್ತೃ ಪದವು ತೃತೀಯ ವಿಭಕ್ತಿಯಿಮದ ಕೂಡಿದೆ.
ಕರ್ಮಣಿ ಪ್ರಯೋಗದ ಲಕ಼ಣಗಳು
ಕರ್ತರಿ ಪ್ರಯೋಗದಲ್ಲಿ ಕರ್ತೃಪದವು ವಿಭಕ್ತಿಯನ್ನು ಅಂತ್ಯವಾಗಿ ಹೊಂದಿರುತ್ತದೆ.
ಕರ್ತರಿ ಪ್ರಯೋಗದಲ್ಲಿ ಕರ್ಮವಾಗಿದ್ದ ಪದವು ಕರ್ಮವಾಗಿದ್ದ ಪದವು ಕರ್ಮಣಿ ಪ್ರಯೋಗದಲ್ಲಿ ಪ್ರಥಮ ವಿಭಕ್ತಿಯನ್ನು ಅಂತ್ಯವಾಗಿ ಉಳ್ಳ ಕರ್ತೃ ಸ್ಥಾನವನ್ನು ಪಡೆಯುತ್ತದೆ.
ಕರ್ತೃ ಪದವು ಕರ್ಮಣಿ ಪ್ರಯೋಗದಲ್ಲಿ ತ್ರತಿಯಾ ವಿಭಕ್ತಿಯಿಂದ ಕೂಡಿದ್ದು ಮಧ್ಯದಲ್ಲಿ ಬಂದಿರುತ್ತದೆ.
ಕ್ರಿಯಾಪದವು ಅಂತ್ಯದಲ್ಲಿ ಬಂದು ಇದೂ ಧಾತುವಿಗೂ ಅಖ್ಯಾತ ಪ್ರತ್ಯಯಕ್ಕೂ ನದುವೆ “ಅಲ್ಪದು” ಎಮಬುದು ಸೇರುತ್ತದೆ.
ಕ್ರೀಯಾಪದವು ಲಿಂಗ, ವಚನ, ಪುರುಷಗಳನ್ನು, ಅನುಸರಿಸುತ್ತದೆ.
ಉದಾ:
ರಾವಣನು ರಾಮನಿಂದ ಕೊಲ್ಲಲ್ಪಟ್ಟನು.
ಕವಿತೆಯು ನನ್ನಿಂದ ಬರೆಯಲ್ಪಟ್ಟಿತ್ತು.,
ಹಣ್ಣು ಸೀತೆಯಿಂದ ತಿನ್ನಲ್ಪಟ್ಟಿತ್ತು.
ಇಳೆಯು ಮಳೆಯಿಂದ ತಣಿಯಲ್ಪಟ್ಟಿತ್ತು.
ಸೆತುವೆಯು ರಾಮನಿಂದ ಕಟ್ಟಲ್ಪಟ್ಟಿತ್ತು.
ಬಕಾಸುರನು ಭೀಮನಿಂದ ಕೊಲ್ಲಲ್ಪಟ್ಟಿತ್ತು.
ನಾನು ಅಣ್ಣನಿಂದ ಕರೆಯಲ್ಪಟ್ಟನು.
ಪುಸ್ತಕವು ಮಕ್ಕಳಿಂದ ಓದಲ್ಪಟ್ಟಿತು.
ಜಾತ್ರೆಯು ಜನರಿಂದ ಮಾಡಲ್ಪಟ್ಟಿತ್ತು.
1 Comments
TQ.sir but please refer to class 9 & class 10 Siri Kannada textbook.In that book the way of changing from kartari to karmani is different from the way I have prescribed in this website.I am totally confused.Please which is the right way to transform
ReplyDelete