✳️ಕನ್ನಡ ವ್ಯಾಕರಣ ಕ್ಕೆ ಸಂಬಂದಿಸಿದಂತೆ ಪ್ರಶ್ನೋತರ ಗಳು

✳️ಕನ್ನಡ ವ್ಯಾಕರಣ ಕ್ಕೆ ಸಂಬಂದಿಸಿದಂತೆ ಪ್ರಶ್ನೋತರ ಗಳು👇👇👇👇

✴️ಷಣ್ಮುಖ ಈ ಪದವನ್ನು ಬಿಡಿಸಿ ಬರೆದಾಗ  ‘ಷಟ್‌+ಮುಖ’ ವಾಗುತ್ತದೆ. ಇದು ಯಾವ ಸಂಧಿಗೆ ಉದಾಹರಣೆಯಾಗಿದೆ?
a) ಪರಸವರ್ಣ ಸಂಧಿ
b)ಶ್ಚುತ್ವ ಸಂಧಿ
c) ಛತ್ವ ಸಂಧಿ      
d) ಅನುನಾಸಿಕ ಸಂಧಿ

D✅

ರಾಮ, ಮನೆ, ಬಿಸಿಲು, ಗಾಳಿ, ನೀರು ಈ ಮೂಲ ಪದಗಳನ್ನು ಯಾವುದಕ್ಕೆ ಉದಾಹರಣೆಯಾಗಿ ನೀಡಬಹುದು?
a) ನಾಮಪದಗಳು
b) ಕ್ರಿಯಾಪದಗಳು
c) ಗುಣವಾಚಕ ಪದಗಳು
d) ಸರ್ವನಾಮ ಪದಗಳು

A✅👌

ರಾಮ, ಜಾರ್ಜ್‌, ಮಹಮ್ಮದ್‌, ಮಹಾವೀರ, ಸಿದ್ಧಾರ್ಥ ಈ ನಾಮಪದಗಳನ್ನು ಏನೆಂದು ಕರೆಯುತ್ತಾರೆ?
a) ರೂಢನಾಮಗಳು          
b) ಅಂಕಿತನಾಮಗಳು
c) ಅನ್ವರ್ಥನಾಮಗಳು        
d)ಪ್ರಕಾರನಾಮಗಳು

B✅👌

ಅವಳಂತಹ ಸುಂದರಿ ಈ ಭೂಮಿಯ ಮೇಲೆ ಯಾರು ಇಲ್ಲ. ಈ ವಾಕ್ಯದಲ್ಲಿ ಪ್ರಕಾರವಾಚಕ ಪದವನ್ನು ಗುರುತಿಸಿ?
a) ಸುಂದರಿ
b) ಭೂಮಿ
c) ಅವಳಂತಹ
d) ಯಾರು

C✅👌

ಪ್ರಥಮ ಪುರುಷದಲ್ಲಿರುವ ‘ಅದು’,‘ಅವರು’ ಎಂಬ ಏಕವಚನ ಪದಗಳು ಬಹುವಚನದಲ್ಲಿ ಈ ಕೆಳಕಂಡ ಯಾವ ಪದಗಳಾಗುತ್ತವೆ?
a) ಅದು, ಅವರು
b) ಅವು, ಅವರು
c) ಇದು, ಇವರು
d) ಮೇಲಿನ ಯಾವುದು ಅಲ್ಲ

B✅👌

ಒಳ್ ಇದು ಯಾವ ವಿಭಕ್ತಿ ಪ್ರತ್ಯೆಯಕ್ಕೆ ಸೇರುತ್ತದೆ?
a) ಪಂಚಮಿ  ವಿಭಕ್ತಿ     
b) ಪ್ರಥಮ ವಿಭಕ್ತಿ
c) ತೃತೀಯ ವಿಭಕ್ತಿ      
d) ಸಪ್ತಮಿ ವಿಭಕ್ತಿ

D✅👌

ಕನ್ನಡ ವ್ಯಾಕರಣ ಪ್ರಕಾರದಲ್ಲಿ ‘ವಚನ’ ಎಂದರೆ ಯಾವ ಅರ್ಥವನ್ನು ಕೊಡುತ್ತದೆ?
a) ಭಾಷೆ ಕೊಡುವುದು
b) ಸಂಖ್ಯೆಯನ್ನು ತಿಳಿಸುವುದು
c) ಮಾತು ಹೇಳುವುದು
d) ಶರಣರ ವಚನಗಳು

B✅👌ಏಕವಚನ ಬಹುವಚನ

ದೇವಿ ಒಲಿದಳು’ ಈ ಪದದಲ್ಲಿ ಸ್ತ್ರೀ ಲಿಂಗ ಹಾಗೂ ನಪುಂಸಕ ಲಿಂಗಳು ಸೇರಿವೆ. ಹಾಗಾದರೆ ಈ ಪದವು ಯಾವ ಲಿಂಗಕ್ಕೆ ಸೇರುತ್ತದೆ?
a) ಸ್ತ್ರೀ ಲಿಂಗ
b) ನಪುಂಸಕ ಲಿಂಗ
c) ಸ್ತ್ರೀ ನಪುಂಸಕ ಲಿಂಗ
d) ಯಾವುದು ಅಲ್ಲ

C✅👌

ಕನ್ನಡ ಭಾಷೆಯ ವ್ಯಾಕರಣದಲ್ಲಿ ಒಟ್ಟು ಎಷ್ಟು ಬಗೆಯ ಸಮಾಸಗಳನ್ನು ಗುರುತಿಸಲಾಗಿದೆ?
a) ಒಂಬತ್ತು
b) ಹತ್ತು
c) ಎಂಟು 
d) ಏಳು

C✅👌

ಕರಿದು +ಮೋಡ= ಕಾರ್ಮೋಡ ಈ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
a) ಕರ್ಮಧಾರೆಯ ಸಮಾಸ
b) ಅರಿ ಸಮಾಸ
c)  ಗಮಕ ಸಮಾಸ
d) ಅಂಶಿ ಸಮಾಸ

A✅👌

ಕನ್ನಡ ವರ್ಣಗಳನ್ನು ವ್ಯಾಕರಣ ಭಾಷೆಯಲ್ಲಿ ಚಾಕ್ಷುಷ ಮತ್ತು ಶ್ರವಣ ಎಂದು ಕರೆಯುತ್ತಾರೆ. ಹೀಗೆಂದರೆ..?
a) ನೋಡುವುದು ಮತ್ತು ಕೇಳುವುದು
b) ನೋಡುವುದು ಮಾತ್ರ
c)ಮಾತನಾಡುವುದು ಮತ್ತು ನೋಡುವುದು     
d) ಕೇಳುವುದು ಮಾತ್ರ

A✅👌

ಸ್ವತಂತ್ರವಾಗಿ ಉಚ್ಚರಿಸುವ ವರ್ಣಗಳನ್ನು ಸ್ವರ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಯಾವುದು ಸ್ವರದ ಒಂದು ವಿಧ ಅಲ್ಲ?
a) ಹ್ರಸ್ವ ಸ್ವರ
b) ದೀರ್ಘ ಸ್ವರ
c) ಪ್ಲುತ ಸ್ವರ
d) ಗುರು ಸ್ವರ

D✅👌

ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
a) ವ್ಯಂಜನಗಳು   
b) ಅನುನಾಸಿಕ
c) ಮಹಾ ಪ್ರಾಣಗಳು         
d) ಯೋಗವಾಹಗಳು

B✅👌

ಶ’, ‘ಷ’, ‘ಸ’ ಕಾರಗಳು ಬೇರೆ ಬೇರೆ ವರ್ಣಗಳಾಗಿದ್ದು ಈ ಅಕ್ಷರಗಳು ಮೂಲತಃ ಯಾವ ಭಾಷೆಯಿಂದ ಬಂದಿವೆ?
a) ಸಿಂದೂ ಭಾಷೆ
b) ದ್ರಾವಿಡ ಭಾಷೆ
c) ಸಂಸ್ಕೃತ ಭಾಷೆ
d) ಪರ್ಷಿಯನ್‌ ಭಾಷೆ

C✅👌

ಕನ್ನಡ ಭಾಷೆಯ ವರ್ಣಗಳನ್ನು ಸ್ವರ ಮತ್ತು ವ್ಯಂಜನ ಎಂದು ವಿಭಾಗಿಸಲಾಗುತ್ತದೆ. ಈ ಕೆಳಕಂಡ ಯಾವುದಕ್ಕೆ ಒತ್ತಕ್ಷರಗಳಿಲ್ಲ?
a) ವ್ಯಂಜನ
b) ಸ್ವರಗಳು
c) ಯೋಗವಾಹಗಳು
d) ಮೇಲಿನ ಎಲ್ಲವು

B✅👌

ಸಹಜ ವ್ಯಂಜನಗಳಿಗೆ ಸ್ವರದ ಸಂಕೇತ (ಚಿಹ್ನೆ)ಗಳನ್ನು (ಕ್+ಅ=ಕ) ಸೇರಿಸಿದಾಗ ಒಂದು ಪೂರ್ಣ ವರ್ಣವಾಗುತ್ತದೆ. ಇದನ್ನು ಏನೆಂದು ಕರೆಯುತ್ತಾರೆ?
a) ವ್ಯಂಜನಾಕ್ಷರ 
b) ಗುಣಿತಾಕ್ಷರ
c) ಸ್ವರಾಕ್ಷರ       
d) ಸುನಿತಾಕ್ಷರ

B✅👌

ಇ, ಈ, ಚ, ಛ, ಜ, ಝ, ಯ, ಶ ಈ ವರ್ಣಗಳು ನಾಲಿಗೆಯಿಂದ ಉಚ್ಚಾರವಾಗುತ್ತವೆ. ಈ ವರ್ಣಗಳನ್ನು ಏನೆಂದು ಕರೆಯುತ್ತಾರೆ?
a) ಕಂಠ್ಯ ವರ್ಣಗಳು
b) ಮೂರ್ಧನ್ಯ ವರ್ಣಗಳು
c) ತಾಲವ್ಯ ವರ್ಣಗಳು
d) ದಂತ್ಯ ವರ್ಣಗಳು

C✅👌

ತುಟಿಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ
(ಉ, ಊ, ಪ, ಫ, ಬ,ಭ)?
a) ದಂತೋಷ್ಠ್ಯ     
b) ಓಷ್ಠ್ಯ
c) ಸಕೃತಿ       
d) ಕರ್ಣ ವರ್ಣ

B✅👌

ಎರಡು ಅಕ್ಷರಗಳು ಸ್ಥಳ, ಕಾಲ, ವಿಳಂಬವಾಗದಂತೆ ಅರ್ಥಕ್ಕೆ ಅನುಸಾರವಾಗಿ ಸೇರುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ?
a) ಸಮಾಸ
b) ಕ್ರಿಯಾಪದ
c) ನಾಮಪದ
d) ಸಂಧಿ

D✅👌

ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ವ್ಯಂಜನವೇ ಸೇರುವ ಸಂಧಿಯನ್ನು ಏನೆಂದು ಕರೆಯುತ್ತಾರೆ?
a) ಕನ್ನಡ ಸಂಧಿ                    
b) ವ್ಯಂಜನ ಸಂಧಿ
c)  ಸಂಸ್ಕೃತ ಸಂಧಿ                     
d) ಸ್ವರ ಸಂಧಿ

B✅👌

ಅಗಸ’ ಶಬ್ಧಕ್ಕೆ ಯಾವ ಶಬ್ಧಾಂಶ ಸೇರಿ ಸರಿಯಾದ ಸ್ತ್ರೀಲಿಂಗ ರೂಪ ಉಂಟಾಗುತ್ತದೆ?

ಅ) ಗಿತಿ
ಬ) ಗಿತ್ತಿ
ಕ) ಗಾತಿ
ಡ) ಗಾರ್ತಿ

B✅👌

‘ಮಗು’ ಶಬ್ಧಕ್ಕೆ ಯಾವ ಶಬ್ಧಾಂಶ ಸೇರಿ ಸರಿಯಾದ ಸ್ತ್ರೀಲಿಂಗ ರೂಪ ಉಂಟಾಗುತ್ತದೆ?

ಅ) ಗಳು
ಬ) ಅಳು
ಕ) ಕ್ಕಳು
ಡ) ಕಳು

A✅👌

ಅತ್ಯಂತ’ ಪದವನ್ನು ಬಿಡಿಸಿ ಬರೆದಾಗ ಉಂಟಾಗುವ ಸಂಧಿ

ಅ) ವೃದ್ಧಿಸಂಧಿ
ಬ) ಶ್ಚುತ್ವಸಂಧಿ
ಕ) ಜಸ್ತ್ವಸಂಧಿ
ಡ) ಯಣ್ ಸಂಧಿ

D✅✅

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey 

Post a Comment

2 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)