ಅವ್ಯಯಗಳು :(ಬದಲಾಗದೆ ಇರುವುದು), ಪ್ರಕಾರಗಳು

ಅವ್ಯಯಗಳು :(ಬದಲಾಗದೆ ಇರುವುದು)
ನಾಮ ಪ್ರಕೃತಿ ಮತ್ತು ಧಾತು ಅಥವಾ ಕ್ರಿಯಾ ಪ್ರಕೃತಿಗಳು ಪ್ರತ್ಯೇಗಳನ್ನು
ಪಡೆಯುವದರ ಮೂಲಕ ತನ್ನ ರೂಮಪವನ್ನು ಬದಲಿಸಿಕೊಳ್ಳುತ್ತವೆ
ಹೀಗೆ ನಾಮ ಪ್ರಕೃತಿ ಮತ್ತು ಕ್ರಿಯಾ ಪ್ರಕೃತಿಗಳಂತೆ ಲಿಂಗ, ವಚನ,
ಕಾಲಕ್ಕನುಗುಣವಾಗಿ ಯಾವ ರೂಪ ಭಾವ ಹೊಂದದೆ ಏಕರೂಪವಾಗಿರುವ ಶಬ್ದಗಳನ್ನು
ಅವ್ಯಗಳನ್ನುತ್ತಾರೆ
ಪ್ರಕಾರಗಳು
1. ಸಾಮಾನ್ಯ ಅವ್ಯಗಳು
2. ಅನುಕರಣ ಅವ್ಯಗಳು
3. ಕ್ರಿಯಾರ್ಥ ಅವ್ಯಗಳು
4. ಭಾವ ಸೂಚಕ ಅವ್ಯಗಳು
5. ಸಂಬಂಧ ಸೂಚಕ ಅವ್ಯಯಗಳು
6. ಅವಧಾರಣಾರ್ಥಕ
7. ಕೃದ್ಧಾಂತ ಅವ್ಯಯ
8. ತದ್ಧಿತಾಂತ ಅವ್ಯಗಳು
1.ಸಾಮಾನ್ಯ ಅವ್ಯಗಳು :
ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತೆ ಅವ್ಯಗಳಿಗೆ
ಸಾಮಾನ್ಯ ಅವ್ಯಗಳೆನ್ನುತ್ತಾರೆ ಇವು ಕ್ರಿಯಾ ವಿಶೇಷಣಗಾಳಿರುತ್ತವೆ.
ಉದಾ: ಸುಮ್ಮನೆ, ಬೇಗನೆ, ತಟ್ಟನೆ, ಚೆನ್ನಾಗಿ, ನೆಟ್ಟಗೆ ಇತ್ಯಾದಿ.
2. ಅನುಕರಣ ಅವ್ಯಗಳು
ಅರ್ಥವಿಲ್ಲದ ದ್ವನಿ ವಿಶೇಷಣಗಳನ್ನು ತಾನು ಹೇಳಿದಂತೆ ಮತ್ತೆ ಮತ್ತೆ
ಅನುಕರಿಸಿ ಹೇಳುವುದನ್ನು ಅನುಕರಣ ಅವ್ಯಗಳನ್ನುತ್ತೇವೆ.
ಉದಾ: ರಪ ರಪ, ಗುಡುಗುಡು, ಸರ ಸರ, ಚುರು ಚುರು, ಘಮ ಘಮ ಗಳಗಳ ಇತ್ಯಾದಿ
3.ಕ್ರಿಯಾರ್ಥಕ ಅವ್ಯಗಳು
ಉದಾ: ಹೌದು ಹೌದು, ಇಲ್ಲ ಇಲ್ಲ, ಬೇಡ ಬೇಡ, ಸಾಕುಸಾಕು ಇತ್ಯಾದಿ
4. ಭಾವಸೂಚಕ ಅವ್ಯಗಳು:
ಮನಸ್ಸಿನಲ್ಲಿ ಉಂಟಾಗುವ ಭಿನ್ನ ಬಗೆಯ ಭಾವಗಳಾದ ಹರ್ಷ, ಸಂಭ್ರಮ, ಗಾಬರಿ,
ತಿರಸ್ಕಾರ, ತೊಂದರೆ ಇಂತಹ ಭಾವನೆಗಳನ್ನು ಅಭಿವ್ಯಕ್ತಿಸುವಾಗ
ಕೆಲವು ಅರ್ಥವಿಲ್ಲದ ಪದಗಳನ್ನು ಉಪಯೋಗಿಸುತ್ತೇವೆ ಇವುಗಳಿಗೆ ಭಾವಸೂಚಕ
ಅವ್ಯಗಳನ್ನುತ್ತೇವೆ.
ಉದಾ: ಅಹಾ!. ಅಭ್ಬಾ!, ಛೇ!. ಥೂ, ಭಲೇ!, ಶಬ್ಭಾಷ್, ಮತ್ತು ಅರೇ ಇತ್ಯಾದಿ
5. ಸಂಭಂದ ಸೂಚಕ ಅವ್ಯಗಳು:
ಎರಡು ಪದಗಳು ಇಲ್ಲವೇ ಎರಡು ವಾಕ್ಯಗಳನ್ನು ಜೋಡಿಸುವ ಶಬ್ಧಗಳಿಗೆ ಸಂಭಂದ
ಸೂಚಕ ಅವ್ಯಗಳೆನ್ನುತ್ತೇವೆ
ಉದಾ: ಆದರೆ, ಮತ್ತು. ಹಾಗು, ಅಥವಾ. ಇಲ್ಲವೆ ಅದುದ್ದರಿಂದ, ಇತ್ಯಾದ್ದಿ.
6. ಅವಧಾರಣಾರ್ಥಕ ಅವ್ಯಗಳು
ಒಂದು ನಿಶ್ಚಿಥ ಭಾವವನ್ನು ಹೇಳುವುದಕ್ಕಾಗಿ ಅವಧರಣೆಯ "ಏ" ಸ್ವರವನ್ನು
ಪೆಡೆದುಕೊಂಡು ಪದವೂ
ಅವಧರಣಾರ್ಥಕ ಅವ್ಯಯವಾಗಿ ಸಿದ್ಧಗೊಳ್ಳುತ್ತದೆ
ಉದಾ: ನೀವೇ, ರಾಮನೇ, ಕಾಯಕವೇ, ನನ್ನದೇ.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey 

Post a Comment

0 Comments